November 7, 2007

My Nymph’s Tear!

My Lovely Nymph,
She Reads my Hearty Words ||
My Heart Prove the Real Beauty of Love.

One Fine Day,She blinks The eyes
She touches My Heart ||
So My heart is every day waiting for it !!!

Its a game of Love
Its an assemble of Hearts ||
And it is a depth of heart beats.

Another fine day,she smile gently,
And she wishpers to my Heart ||
One lucky day My Love got Green signal.

Its a magic of pair,
And foundation of fairy life ||
My heart of hearts is her love.

She fines till Yesterday,
But today she cries ||
Because she is facing her father’s RED signal !!!


ರಾಮದಾಸರ ನೆನಪು

July 24, 2007

(ಕಲಾಮಂದಿರದಲ್ಲಿ “ಪ್ರೊ. ರಾಮದಾಸರ ಒಂದು ನೆನಪು” ಕಾರ್ಯಕ್ರಮಕ್ಕೆ ಹೋದಾಗ ಸುರಿಯುತ್ತಿದ್ದ ಜಿಟಿ ಜಿಟಿ ಮಳೆ, ಆ ಮಳೆಯ ಮಧ್ಯೆಯೂ ಬಂದ ಜನಸಾಗರ … ಇದನ್ನೆಲ್ಲ ನೋಡಿ ಬರೆದ ಕವನ)

ಭಗವಂತ ಏನಿದು ಸೋನೆ?
ಮೇಘಕ್ಕೇನು ನೆಗಡೀನೆ!
ಗಗನಕ್ಕೆ ನಗದಂತೆ ಮಾಡಿದೆ ಸೋನೆಯಾ ಬೇನೆ.

ತುಂತುರು ಮಳೆ ಸಾಕಾಗಿದೆ,
ಭೂತಾಯಿಯ ಒಡಲು ತುಂಬಿದೆ.
ಮುತ್ತಿನ ನೀರು ಈ ರೀತಿ ಬೇಸರ ತರಬಾರದು.

ಗುಡುಗಿಲ್ಲ, ಮಿಂಚಿಲ್ಲ,
ಮೆಡಿಯುತಾವ ಹನಿಗಳೆಲ್ಲ ||
ತಡಬಡಿಸುತಾವ ಕಟಕಟನೆ ಹಲ್ಲುಗಳೆಲ್ಲ.

ಯಾವ ಕೆಲಸ ಕಾರ್ಯಗಳೂ ಇಲ್ಲ,
ಈ ವಸುಧೆಗೆ ಸೂರ್ಯನೂ ಇಲ್ಲ ||
ಯಾವ ಮಳೆಯ ಬಾಕಿಯೋ ಧರೆಯೊಳು ಮೆರೆಯುತಿಡೆಯಲ್ಲ.

ಕ್ರಾಂತಿ ಮಳೆ ಮೇಳೈಸಿಹುದಲ್ಲಾ,
ಚಿಂತೆ ಈಗ ಮೈದಳೆಯಿತಲ್ಲ ||
ಚಿಂತನೆಗೈಯಲು ರಾಮದಾಸರೆ ಇಲ್ಲವಲ್ಲ.

ಜಗದ ಬಾಳ ಬದಲಿಸಲೊರಟ ರಾಮದಾಸರೇ,
ಜಗದ ನೊಗವ ಹೊತ್ತ ಸುಂಡಗಳ
ಅನ್ಯಾಯದ ಬಂಡೆಗಳು ಬೆನ್ಡಾಗಲಿವೆ.
ಒಂದಲ್ಲಾ ಒಂದು ದಿನ ಕ್ರಾಂತಿಯಾ ಕಿಡಿಗಳೆಲ್ಲಾ,
ಕೆಂಡದಾ ಸೋನೆಯಾಗಿ ಎಡೆ ಬಿಡದೆ ಜಡಿಯಲಿವೆ.

(1-7-2007)


ತಂದೆ!

July 24, 2007

ಪ್ರಿಯಾ, ನನಗೆ ನೀನೆ ತಾಯಿ ತಂದೆ
ಎಲ್ಲರನು ಬಿಟ್ಟು ನಿನ್ನೊಂದಿಗೆ ಓಡಿ ಬಂದೆ.
ಪ್ರಿಯೆ, ಹೋಗಲಿ ಬಿಡು ಈಗ ವರದಕ್ಷಿಣೆ ಎಷ್ಟು ತಂದೆ?

(ಜನವರಿ 2007)


ನಗೆ

July 24, 2007

ನಗೆಯಲ್ಲಿ ಎರಡು ಬಗೆ
ಒಂದು ಬಾಯ್ಬಿಡದ ನಗೆ
ಮತ್ತೊಂದು ಬಿಟ್ಟ ಬಾಯಿ ಬಿಟ್ಟ ಹಾಗೆ.

(ಜನವರಿ 2007)


ಕುವೆಂಪು ಅವರ ಒಂದು ಚುಟುಕು

July 15, 2007

ಮಠಾಧಿಪತಿ

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ್ಮವ ಮೆರೆವರ ನೋಡಯ್ಯ!

                              -ಕುವೆಂಪು