ನನ್ನ ಬಗ್ಗೆ

chandan kumar aswal

Chandan Kumar Aswal

ನನ್ನ ಹೆಸರು ಚಂದನ್ ಕುಮಾರ್ ಅಸ್ವಾಳ್. ನಾನು ಹುಟ್ಟಿದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ನನ್ನ ಊರಿನ ಹೆಸರು “ಅಸ್ವಾಳ್”. ಹೀಗಾಗಿ ನನ್ನ ಬ್ಲಾಗಿನ ಹೆಸರನ್ನು ಅಸ್ವಾಳ್ ಎಂದೇ ನಾಮಕರಣ ಮಾಡಿದ್ದೇನೆ.

ನನ್ನ ಊರಿನ ಬಗ್ಗೆ:
ಅಸ್ವಾಳ್ ಎನ್ನುವುದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಒಂದು ಪುಟ್ಟ ಗ್ರಾಮ.


ಶಿಕ್ಷಣ:
ಪ್ರಾಥಮಿಕ
ಮತ್ತು ಮಾಧ್ಯಮಿಕ ವ್ಯಾಸಂಗವನ್ನು ಅಸ್ವಾಳದಲ್ಲೆ ಮುಗಿಸಿ, ಪ್ರೌಢ ಮತ್ತು ಪದವಿಪೂರ್ಣ ಶಿಕ್ಷಣವನ್ನು ಕರಿಮುದ್ದನಹಳ್ಳಿ ಸರ್ಕಾರಿ ವಿದ್ಯಾಲಯದಲ್ಲಿ ಮುಗಿಸಿದೆ.

ನಂತರ ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪಡೆದೇ (ಬಿ.ಕಾಮ್). ಮಹಾಜನ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಅಧ್ಯಯನ ಮುಗಿಸಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ವಕೀಲಿ ವೃತ್ತಿ ಆರಂಭಿಸಲಿದ್ದೇನೆ.

ಹವ್ಯಾಸಗಳು:
ಚುಟುಕು, ಕವನ, ಲೇಖನಗಳನ್ನು ಬರೆಯುವುದು ನನ್ನ ಪ್ರಮುಖ ಹವ್ಯಾಸ. ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದೇನೆ. ಇತ್ತೀಚಿಗೆ ಮೈಸೂರು ಆಕಾಶವಾಣಿಯಲ್ಲಿ Announcer ಆಗಿ temporary basic ನಲ್ಲಿ ಸೇರಿದ್ದೇನೆ.

ವೃತ್ತಿ:
ವಕೀಲಿ ವೃತ್ತಿಯನ್ನು ಮಾಡಲು ಆಸಕ್ತಿ ಇದೆ. ಆದರೆ, ನನ್ನ ಪ್ರಕಾರ ಹಸುರು ಕೃಷಿ ಎನ್ನುವ ವೃತ್ತಿಯ ಮುಂದೆ ಇನ್ನಾವುದೇ ಕೆಲಸ ನನಗೆ ಖುಷಿ ನೀಡುವುದಿಲ್ಲ. ರಾಸಾಯನಿಕಗಳನ್ನು ಬಳಸದೆ, ಸಹಜ ಕೃಷಿ ಮಾಡುವುದು ನನ್ನ ಧ್ಯೇಯ.

“ಹಸುರೇ ನನ್ನ ಉಸಿರು”
“ಜೈ ಭೂಮಿ ತಾಯಿ. ಜೈ ಪ್ರಕೃತಿ ಮಾತೆ”

One Response leave one →
  1. 2007 July 14

    great
    keep going
    rasheed

Leave a Reply

Note: You can use basic XHTML in your comments. Your email address will never be published.

Subscribe to this comment feed via RSS